About Royal College
“ರಾಯಲ್ ಕಾಲೇಜಿನ ಸ್ಥಾಪನೆಯ ಹಿಂದಿನ ಉದ್ದೇಶ”
ಶಿಕ್ಷಣ ಎಂದರೇನು? ಇಂಥದ್ದೊಂದು ಪ್ರಶ್ನೆಗೆ ಸಾವಿರಾರು ವರ್ಷಗಳಿಂದ ಚರ್ಚೆಗಳು ಅಥವಾ ಉತ್ತರಕೊಡುವ ಪ್ರಯತ್ನವನ್ನು ಅದೆಷ್ಟೋ ವಿದ್ವಾಂಸರು, ಶಿಕ್ಷಣ ತಜ್ಞರು, ಸಾಹಿತಿಗಳು ನೀಡುತ್ತಲೇ ಬಂದಿದ್ದಾರೆ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಅವುಗಳಲ್ಲಿ ನನಗೆ ವೈಯಕ್ತಿಕವಾಗಿ ಹಿಡಿಸಿದ್ದು ಸ್ವಾಮಿ ವಿವೇಕಾನಂದರು ಶಿಕ್ಷಣದ ಕುರಿತು ನೀಡಿದ ಹೇಳಿಕೆ. ”ಯಾವ ಶಿಕ್ಷಣ ವ್ಯಕ್ತಿಯೋರ್ವನನ್ನು ಆಧ್ಯಾತ್ಮಿಕವಾಗಿ ಸಮರ್ಥಗೊಳಿಸುವುದೋ ಅದು ಶಿಕ್ಷಣ, ಮತ್ತು ವ್ಯಕ್ತಿಯೋರ್ವನಲ್ಲಿ ಅದಾಗಲೇ ಹುದುಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅದನ್ನು ಪೋಷಿಸುವುದು ಅದು ಶಿಕ್ಷಣ” ಈ ಎರಡೂ ಮಾತುಗಳಲ್ಲಿ ಅದೆಷ್ಟು ಮಹತ್ತರ ಸಂದೇಶವಿದೆ ನೋಡಿ.
ಭಾರತ ಆಧ್ಯಾತ್ಮಿಕ ಸಂಪನ್ನತೆಗೆ ಹೆಸರಾದ ನಾಡು, ಭಾರತ ಬಿಟ್ಟು ಜಗತ್ತಿನ ಯಾವ ರಾಷ್ಟ್ರಕ್ಕೂ ಆಧ್ಯಾತ್ಮಿಕತೆಯ ತಲೆಬುಡವೂ ತಿಳಿದಿಲ್ಲ, ಇದೊಂದು ಮನಸ್ಸಿನೊಳಗಿನ ವಿಜ್ಞಾನ, ಇಂತಹ ಒಂದು ಅಪೂರ್ವ ಜ್ಞಾನವನ್ನು ನಮ್ಮ ಪ್ರಾಚೀನ ಭಾರತೀಯರು ಸಿದ್ಧಿಸಿಕೊಂಡು ಅನೇಕಾನೇಕ ಸಾಧನೆಗಳನ್ನು ಮಾಡಿದ್ದಾರೆ. ಹೀಗೆ ಆಧ್ಯಾತ್ಮಿಕವಾದ ಸಿದ್ಧಿಯನ್ನು ಗಳಿಸುವುದೇ ಶಿಕ್ಷಣ ಎಂಬುದು ಒಂದರ್ಥವಾದರೆ, ಇನ್ನೊಂದು ವ್ಯಾಖ್ಯಾನದಲ್ಲಿ ವ್ಯಕ್ತಿಯೋರ್ವನಲ್ಲಿ ಅದಾಗಲೇ ಹುದುಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ, ಪ್ರಾಮುಖ್ಯತೆ ನೀಡಿ ಅವರನ್ನು ಆ ಕ್ಷೇತ್ರದಲ್ಲಿ ಸಾಧನೆ ಮಾಡಿಸುವುದು ಶಿಕ್ಷಣ ಎಂಬುದಾಗಿದೆ. ಪ್ರಸ್ತುತ ಪ್ರಪಂಚದಲ್ಲಿ ನಾವು ಶಿಕ್ಷಣ ಕ್ಷೇತ್ರದಲ್ಲಿ ಇವೆರಡನ್ನೂ ಹೇಗೆ ಅನ್ವಯಿಸಬೇಕು? ಹೇಗೆ ಅನುಸಂಧಾನಗೊಳಿಸಬೇಕು ಎಂಬುದೇ ನಮ್ಮೆದುರಿಗಿರುವ ದೊಡ್ಡ ಸವಾಲು.
ಬೆಂಗಳೂರಿನ ಮತ್ತಿಕೆರೆಯ ಹೃದಯ ಭಾಗದಲ್ಲಿ ಸ್ಥಾಪನೆ ಆಗಿರುವ ಶಿಕ್ಷಣ ಸಂಸ್ಥೆಯೇ ರಾಯಲ್ ಕಾಲೇಜು. ಸುದೇವ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ತಲೆ ಎತ್ತಿ ನಿಂತು ತನ್ನ ವಿಶಿಷ್ಟ ಮತ್ತು ಪರಿಣಾಮಕಾರಿ ತರಬೇತಿಯೊಂದಿಗೆ ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಬೆಂಗಳೂರಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾಗುವ ಎಲ್ಲಾ ಲಕ್ಷಣಗಳನ್ನ ಪ್ರಕಟೀಕರಿಸುತ್ತಾ ಮುಂದೆ ನುಗ್ಗುತ್ತಿರುವ ಸಂಸ್ಥೆಯಿದು. ಈ ಕಾಲೇಜಿನ ಸ್ಥಾಪನೆಯ ಹಿಂದೆ ಒಂದು “ಸಿದ್ಧತೆ, ಶುದ್ಧತೆ ಮತ್ತು ಬದ್ಧತೆಗಳಿವೆ”. ಇದೊಂದು ಅಪ್ಪಟ ವಾಣಿಜ್ಯ ಮಹಾವಿದ್ಯಾಲಯವಾಗಿದ್ದು ವಿಶೇಷವಾಗಿ 8 ಸಂಯೋಜನೆಗಳನ್ನು ಹೊಂದಿರುವುದು ವಿಶೇಷವಾಗಿದೆ. ಜೊತೆಗೆ ಸಿ.ಎ, ಸಿ.ಎಸ್, ಕ್ಲಾಟ್ ತರಬೇತಿಯನ್ನೂ ನೀಡುವ *ಇಂಟಿಗ್ರೇಟೆಡ್ ಕಾಲೇಜ್ ಇದಾಗಿದೆ. ಕೇವಲ ಮಾಹಿತಿಯನ್ನು ಮಾತ್ರ ನೀಡುವ ಉದ್ದೇಶ ನಮ್ಮದಲ್ಲ, ಬದಲಾಗಿ ಗುಣಮಟ್ಟದ ಶಿಕ್ಷಣ, ಕ್ರಿಯಾಶೀಲತೆ, ಸಂಸ್ಕಾರ ಮತ್ತು ಶಿಸ್ತು ಈ ಸಂಸ್ಥೆಯ ನಾಲ್ಕು ಸ್ತಂಭಗಳು, ಅಂದರೆ ಸಂಸ್ಥೆ ನಿಂತಿರುವುದೇ ಈ ನಾಲ್ಕು ಜ್ಞಾನದ ತಳಹದಿಯಲ್ಲಿ.
ಮೇಲೆ ಉಲ್ಲೇಖಿಸಿದ ಆಧ್ಯಾತ್ಮಿಕತೆ ಮತ್ತು ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯ ಗುರುತಿಸುವಿಕೆ ಪರೋಕ್ಷವಾಗಿ ಈ ನಾಲ್ಕು ಜ್ಞಾನ ಪ್ರಕಾರದಲ್ಲಿ ಅಡಗಿದೆ. ನಮ್ಮ ಸಂಸ್ಥೆ ಕೇವಲ ಪಠ್ಯದ ಪೂರ್ಣಿಕೆಗೆ ಸೀಮಿತವಾಗದೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ರಾಜ್ಯ ಮಟ್ಟದ ಸೆಮಿನಾರ್ ಗಳು, ವರ್ಕ್ ಶಾಪ್ ಗಳು, ಕೌಶಲ್ಯ ತರಬೇತಿ ಇಷ್ಟೇ ಅಲ್ಲದೆ ಮಕ್ಕಳಿಗೆ ಸಾಧನೆಯೆಡೆಗೆ ಪ್ರೇರಣೆ ನೀಡಲೆಂದೇ ಪ್ರತಿ ತಿಂಗಳು ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಕರೆದು ಆಯೋಜಿಸುವ ಮೀಟ್ ಅಂಡ್ ಗ್ರೀಟ್ ವಿತ್ ಸೆಲಿಬ್ರೆಟಿ ಮುಂತಾದ ವಿಶಿಷ್ಟ ಕಾರ್ಯಕ್ರಮಗಳು, ಅನ್ಯ ರಾಜ್ಯಗಳಿಗೆ ಇಂಡಸ್ಟ್ರಿಯಲ್ ವಿಸಿಟ್ ಗಳು ಹೀಗೆ ತನ್ನ ವೈವಿಧ್ಯಮಯ ಆಯಾಮಗಳಿಂದ ಅನ್ಯ ಶಿಕ್ಷಣ ಸಂಸ್ಥೆಗಳಿಗಿಂತ ಭಿನ್ನವಾಗಿ ತನ್ನನ್ನು ತಾನು ತೆರೆದುಕೊಂಡಿದೆ.
ಈ ಸಂಸ್ಥೆಯ ಸಂಸ್ಥಾಪಕರಾದ ಡಾ. ದೇವರಾಜ್ ಅವರು ಒಬ್ಬ ಭಾಷಾ ಪ್ರೀತಿಯ ಕನ್ನಡ ಉಪನ್ಯಾಸಕರು ಮತ್ತು ಶಿಕ್ಷಣ ತಜ್ಞರಾಗಿದ್ದುದು ಸಂಸ್ಥೆಯ ಜ್ಞಾನೋನ್ನತಿಗೆ ತುಂಬಾ ಸಹಕಾರಿಯಾಗಿದೆ. ಒಟ್ಟಿನಲ್ಲಿ ಮತ್ತಿಕೆರೆಯ ರಾಯಲ್ ಕಾಲೇಜು ಹೇಗೆ, ಏನು, ಎತ್ತ ಎಂಬುದನ್ನು ಸಾಕ್ಷೀಕರಿಸಿಕೊಳ್ಳಬೇಕೆಂದರೆ ಸಂಸ್ಥೆಯ ಒಳಗೆ ಪ್ರವೇಶಿಸಿದಾಗಲೇ ಅರಿಯಲು ಸಾಧ್ಯ. ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಸಾಗಬೇಕೆಂದರೆ ರಾಯಲ್ ಕಾಲೇಜು ಒಂದು ಉತ್ತಮ ಪರಿಹಾರವಾಗಿದೆ.
– ಡಾ.ಲಕ್ಷ್ಮೀಶ್ ಹೆಗಡೆ ಸೋಂದಾ
ಪ್ರಾಚಾರ್ಯರು, ಇತಿಹಾಸಕಾರರು ಮತ್ತು ಸದಸ್ಯರು ಕೇಂದ್ರ ಸರ್ಕಾರದ ನ್ಯಾಶನಲ್ ಫೆಲೋಶಿಪ್ ಕಮಿಟಿ ದೆಹಲಿ
From The Prinicipal's Desk
Swami Vivekanand believed education is the manifestation of perfection which is already in men. The true aim of education is to develop insight into the individuals, so that they become able to search out and realise unity in diversity. Our Royal college has the same principles as it provides the students a space to give wings to their dreams and a liberating outlet to their thoughts. We truly believe that education with quality, creativity and culture. According to me rather than getting information acquiring knowledge is important ,to achieve this we have all the facilities like attractive building with all modern possibilities, highly qualified experience lecturers, creative and practical mindset, homely atmosphere, encouragement to cultural activities and sports, job Oriented coaching, and well stocked digital library more importantly supportive management etc. We welcome you to our college for a complete individual development.
Dr. Lakshmeesh Hegade Sonda
Principal Of Royal College
One of the notable historians and orator of Karnataka. Having 15 years of academic experience as a History lecturer and Principal. Present member of Tagore National fellowship committee Delhi. Published 15 Books and more than 400 articles so far received Basavaraj Kattimani, Kadamba Sevaratna and Ravi Datar State awards. Convenor of the state level History Conference at Sonda. Participated in various National and International level conferences as a resource person. Delivered more than 500 speeches in different parts of the state. Honarary editor of Vikrama weekly magazine coffee table Books.
OUR FACILITIES
Scholarship
for meritorious and deserving students
Excellent
college campus in a five storey building at a peaceful locality
Equal
importance for sports and cultural activities
Individual
attention, remedial teaching, special coaching, counseling and mentoring
Computer laboratory
with the ratio of 1:1 computers to the students
Transportation
facility
Well-stacked
library with internet facility
Spacious
interactive classrooms
Personality
development, communication skills & leadership training classes
Qualified
and dedicated teachers with 10 to 15 years of experience in entrance examination coaching
Audio visual
aided learning opportunities
Highly competitive
coaching material prepared by expert teachers
Ample
parking space